ತುಮಕೂರು: ಹೌದು ರೈತರು ಬೆಳೆ ಬಂದಿಲ್ಲ ವೈಜ್ಞಾನಿಕ ಬೆಲೆ ಕೊಡಿ. ಕರೆಂಟ್ ಕೊಡಿ ಹೀಗೆ ಹತ್ತು ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಾರೆ.

ಆದರೆ ಯುವ ರೈತರು ಹೊಸ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರ ಅಂತರ್ಜಾತಿ ವಿವಾಹ ಸೇರಿ ಇನ್ನಿತರ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ. ಕೆಲ ಯೋಜನೆಗಳ ಬದಲು ಯುವ ರೈತರನ್ನು ಮದುವೆಯಾದರೆ ಯುವತಿಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆಂದು ಘೋಷಣೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ ಎಂದು ತುಮಕೂರಿನ ರೈತರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ನಾವು ರೈತರು ಅನ್ನೋ ಒಂದೇ ಕಾರಣಕ್ಕೆ ಹುಡುಗಿಯರು ಮದುವೆ ಆಗಲ್ಲ ಎನ್ನುತ್ತಾರೆ. ನಾವು ಸಹ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತೀವಿ. ಹೀಗಾಗಿ ನಮ್ಮ ನೆರವಿಗೆ ಸರ್ಕಾರ ಬರಬೇಕೆಂದು ರೈತರು ಕೇಳಿಕೊಂಡಿದ್ದಾರೆ.!