ಬೆಂಗಳೂರು:  ಯುಪಿಎಸ್ಸಿ ನಾಗರೀಕ ಸೇವೆ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 759 ಅಭ್ಯರ್ತಿಗಳು ತೆರ್ಗಡೆಯಾಗಿದ್ದಾರೆ.

ಇದರಲ್ಲಿ ಕರ್ನಾಟಕದ 24 ಜನ ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ. ಧಾರವಾಡದ ರಾಹುಲ್ ಶರಣಪ್ಪ ಸಂಕನೂರು 17ನೇ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಇವರೆಲ್ಲರೂ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸೇವೆಗೆಲಿಗೆ ಅರ್ಹತೆ ಪಡೆದಿದ್ದಾರೆ. ಆಯ್ಕೆಯಾದ ಒಟ್ಟು 759 ಅಭ್ಯರ್ಥಿಗಳಲ್ಲಿ  182 ಮಹಿಳೆಯರಿದ್ದಾರೆ.