ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು  ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.  ಸ್ಪೆಷಲಿಸ್ಟ್ ಗ್ರೇಡ್, ಸೈಂಟಿಫಿಕ್ ಅಸಿಸ್ಟೆಂಟ್ ಮತ್ತು ಫೋರ್‌ಮ್ಯಾನ್‌ ಸೇರಿ ಒಟ್ಟು 44 ಹುದ್ದೆಗಳು ಖಾಲಿ ಇವೆ.

ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಎಂಜಿನಿಯರಿಂಗ್, ಎಂಬಿಬಿಎಸ್ ಪದವಿ ಪಡೆದಿರಬೇಕು. ಆಯ್ಕೆಯಾದವರಿಗೆ 7 ವೇತನ ಆಯೋಗದ ಅನ್ವಯ ವೇತನ ದೊರೆಯುತ್ತಿದೆ. ಅರ್ಜಿ ಸಲ್ಲಿಸಲು ಕಡೆ ದಿನ ಅ.29 ಆಗಿದ್ದು, ಹೆಚ್ಚಿನ ಮಾಹಿತಿಗೆ upsconline.nic.inಗೆ ಸಂಪರ್ಕಿಸಬಹುದು.