ನವದೆಹಲಿ: ಗೃಹ ಸಚಿವಾಲಯದ ಅನುಮತಿ ಪಡೆದ ಬಳಿಕ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ವು ಇಂದು ದೇಶದ ಎಲ್ಲಾ ವಿವಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, 2019-20ನೇ ಸಾಲಿಗೆ ಅನ್ವಯವಾಗುವಂತೆ ನಡೆಸಬೇಕಿರುವ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಸಿ ಎಂದು ಸೂಚನೆ ನೀಡಿದೆ.

ಈ ವೇಳೆ, ವಿವಿಗಳು ತಮಗೆ ಅನುಕೂಲವಾಗುವಂತೆ ಆನ್ ಲೈನ್, ಆಫ್ ಲೈನ್ ಅಥವಾ ಆನ್ ಲೈನ್-ಆಫ್ ಲೈನ್ ಮಿಶ್ರಿತ ಪರೀಕ್ಷೆಗಳನ್ನೂ ನಡೆಸಬಹುದು ಎಂದು ಸಲಹೆ ನೀಡಿದೆ.