ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸಭೆಯಲ್ಲಿ ಶೇ 2 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಶಿಫಾರಸ್ಸಿಗೆ ಒಮ್ಮತದ ಅನುಮೋದನೆ ಸಿಕ್ಕಿದೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಏರಿಕೆಯ ಲೆಕ್ಕಾಚಾರ ಹಾಕುತ್ತಿರುವ ನೌಕರರಿಗೆ ಈಗ ತುಟ್ಟಿಭತ್ಯೆ ಹೆಚ್ಚಳವಾಗಲಿದೆ. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಲಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ.

7ನೇ ವೇತನ ಆಯೋಗದ ಫಿಟ್ಮೆಂಟ್ ಫಾರ್ಮೂಲಾದ ಆನುಗುಣವಾಗಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ 6,077ಕೋಟಿ ರು ಹೆಚ್ಚಿನ ಹೊರೆ ಬೀಳಲಿದೆ.

ತುಟ್ಟಿ ಭತ್ಯೆ(dearness allowance): ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ. ಹಾಗಾಗಿ ಕೇಂದ್ರ ಸರಕಾರದ ನೌಕರರಿಗೆ 7 ನೇ ವೇತನ ಆಯೋಗದ 2% ತುಟ್ಟಿ ಭತ್ಯ ಹೆಚ್ಚಾಗಲಿದೆ. ಇದು ಯುಗದಿ ಹಬ್ಬದ ಗಿಫ್ಟ್ಂತೆ.!