ಚಿತ್ರದುರ್ಗ: ನನಗೆ ಯಾವ ಪಕ್ಷದ ಮೇಲು ನಂಬಿಕೆ ಇಲ್ಲ ಎಂದು  ನಟ ಪ್ರಕಾಶ್ ರೈ ಹೇಳಿದರು.

ನಗರದ ಪತ್ರಿಕಾ ಕಚೇರಿಯಲ್ಲಿ ಜಿಲ್ಲಾ ಪತ್ರಕರ್ತ ಸಂಘ ದ ವತಿಯಿಂದ ಪತ್ರಕರ್ತ, ಚಿಂತಕರೊಂದಿಗೆ ಸಂವಾದ ಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಶ್ನೆ ಮಾಡುವ ಶಕ್ತಿಯನ್ನು ಬೆಳಸಿಕೊಳ್ಳಬೇಕು. ನಾನು ಯಾವುದೇ ಕಾರಣಕ್ಕೂ ರಾಜಕಾರಣಮಾಡಲು ಬಂದಿಲ್ಲ ಎಂದರು.

 

ಒಮ್ಮೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಆ ಪಕ್ಷ ಅಧಿಕಾರ ಚಲಾಯಿಸುವುದಲ್ಲಾ ಅದು ಓಟು ಹಾಕಿದವರು ಓಟು ಹಾಕದವರು ಎಲ್ಲರೂ ಒಂದೆ. ನಾನು ನರೇಂದ್ರ ಮೋದಿಯವರಿಗೆ ಓಟು ಹಾಕಿಲ್ಲ ಆದ್ರೆ ಅವರು ನಮ್ಮ ಪ್ರಧಾನ ಮಂತ್ರಿಗಳು ಎಂದರು. ಜನರು ಪ್ರಶ್ನೆ ಮಾಡುವ ಶಕ್ತಿಯನ್ನು ಬೆಳಸಿಕೊಳ್ಳ ಬೇಕು ಎಂದರು.

ನೀವು ಮಾತನಾಡುವುದಕ್ಕೂ ಮುಂಚೆ ಕೋಮುವಾದಿ ಹಾಗೂ ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಇದ್ದವು ಆಂದು ಮಾತ ನಾಡದಿದ್ದವರೂ ಇಂದು ಏಕೆ ಧ್ವನಿ ಎತ್ತುದಿದ್ದೀರ ಎಂಬ ಪ್ರಶ್ನೆಗೆ ಇಲ್ಲ ನನಗೆ  ಗೌರಿ ಲಂಕೇಶರ ಹತ್ಯೆ ಆದಾಗ ನನ್ನಲಿ ಪ್ರಶ್ನೆ ಉದ್ಬವಿಸಿತು. ನನಗೆ ಈಗ ಜ್ಞಾನೋದಯವಾಗಿದೆ ಕ್ಷಮಿಸಿ ಎಂದು ಹೇಳಿದರು.

( ಹೆಚ್ಚಿನ ವಿಷಯಕ್ಕೆ ಬಿಸಿ ಸುದ್ದಿ ಯ್ಯೂ ಟೂಬ್ ಚಾನಲ್ ನೋಡಿ. Bcsuddi.com. youtub channel )