ಚಿತ್ರದುರ್ಗ: ಇಂದು ಹಬ್ಬಗಳು ಜಾತಿಗಳಿಗೆ ಸೀಮಿತವಾಗಿರುತ್ತವೆ. ಇದನ್ನು ಹೊರತು ಪಡಿಸಿದ್ದು ಎಂದರೆ ಕ್ರೀಡೆಗಳಿಗೆ ಮಾತ್ರ. ಕ್ರೀಡೆಪಟುಗಳಿಗೆ ಜಾತಿ ಧರ್ಮ ಇರುವುದಿಲ್ಲ, ಇಲ್ಲಿ ಲಿಂಗತಾರತಮ್ಯ ಇರುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರೀಡೆ ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಹೇಳಿದರು.

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಮುರಾ ಕಪ್ ರಾಜ್ಯಾದಾದ್ಯಂತ ಖ್ಯಾತಿಗೊಳ್ಳುತ್ತ ಹೆಚ್ಚು ಮಾನ್ಯತೆ ಪಡೆದುಕೊಳ್ಳುತ್ತಿದೆ. ನಮಗೂ ಕ್ರೀಡೋತ್ಸವ ಬಗ್ಗೆ ಆಸಕ್ತಿಯಿತ್ತು. ಶ್ರೀಗಳು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಶರಣ ಸಂಸ್ಕೃತಿಯ ಉತ್ಸವ ಹಾಗು ಜಮುರಾ ಕಪ್ ಶಿಸ್ತುಬದ್ದವಾಗಿ ನಡೆಯುತ್ತದೆ ಎಂದು ಹೇಳಿದರು.
ಸಮಾರಂಭದ ದಿವ್ಯಸಾನಿದ್ಯ ವಹಿಸಿದ್ದ ಡಾ.ಶಿವಮೂರ್ತಿಮುರುಘಾ ಶರಣರು ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಕ್ರೀಢಾಪಟುಗಳಿಗೆ ಶುಭ ಹಾರೈಸಿದರು. ಪಂದ್ಯಾವಳಿಯ ವಿಜೇತ ತಂಡಗಳಿಗೆ ರೂ.೪೦೦೦೦, ೩೦೦೦೦, ೨೦೦೦೦ ಹಾಗು ೧೦೦೦೦ ನಗದು ಹಾಗು ಪಾರಿತೋಷಕಗಳನ್ನು ಪ್ರದಾನ ಮಾಡಲಾಗುವುದು ಎಂದರು.

ಕಾರ್‍ಯಕ್ರಮದ ಸಮ್ಮುಖ ವಹಿಸಿದ್ದ ತಿಪಟೂರು ಶ್ರೀ ಷಡಾಕ್ಷರಿ ಮಠದ ಶ್ರೀರುದ್ರಮುನಿ ಮಹಾಸ್ವಾಮಿಗಳು ಕಾರ್‍ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಶ್ರೀ ಬೋವಿಗುರುಪೀಠದ ಶ್ರೀ ಹಿಮ್ಮಡಿ ಸಿದ್ದರಾಮೇಶ್ವರಸ್ವಾಮಿಗಳು ವಹಿಸಿದ್ದರು.