ಯಾವುದೇ ಕಾರಣಕ್ಕೂ ಸೆಪ್ಟೆಂಬರ್ ನಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭಿಸಲ್ಲ: ಸಚಿವ ಎಸ್ ಸುರೇಶ್ ಕುಮಾರ್

ಮಂಡ್ಯ : ಯಾವುದೇ ಕಾರಣಕ್ಕೂ ಸೆಪ್ಟೆಂಬರ್ ನಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭಿಸಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಅವರು, ನನಗೆ ಬಹು ಮುಖ್ಯ ಆದ್ಯತೆ ಅಂದ್ರೇ ಅದು ನಮ್ಮ ಮಕ್ಕಳ ಆರೋಗ್ಯ. ಕೊರೋನಾ ಭೀತಿಯ ನಡುವೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸಲ್ಲ.  ಕೊರೋನಾ ಭೀತಿಯ ನಡುವೆಯೂ ಶಾಲೆ ಹೇಗೆ ಆರಂಭಿಸಬೇಕು. ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಶಿಕ್ಷಕರು ಊರಿನ ಪಡಶಾಲೆಯಲ್ಲಿ ಮಕ್ಕಳಿಗೆ ಮಾಡ್ತಿದ್ದಾರೆ. ಕೊರೋನಾ ಕಾಲದಲ್ಲಿ ನಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಕೊರೋನಾ ಭೀತಿಗೆ ಒಳಗಾಗಬಾರದು ಎಂಬಕಾರಣಕ್ಕೆ ಸೆಪ್ಟೆಂಬರ್ ನಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭಿಸಲ್ಲ ಎಂದು ಹೇಳಿದ್ದಾರೆ.