ಬೆಂಗಳೂರು : ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲಿ ಟ್ರಾಫಿಕ್ ಫ್ರೀ ಮಾಡಿಕೊಡಲು ಅಂಬುಲೆನ್ಸ್ ತಡೆಯದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ನಾನು ಸಂಚರಿಸುವ ಮಾರ್ಗದಲ್ಲಿ ನನಗೆ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರಿ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ನಾನು ಗಮನಿಸಿರುತ್ತೇನೆ. ನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ, ಗಣ್ಯವ್ಯಕ್ತಿಗಳ ಸಂಚಾರ ಸಂದರ್ಭದಲ್ಲಿ ಆಂಬುಲೆನ್ಸ್ ವಾಹನಗಳು ಮುಕ್ತವಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚರಿಸಲು ಅಗತ್ಯಕ್ರಮ ವಹಿಸಲು ಜಿ. ಪರಮೇಶ್ವರ್ ಅವರು ಪತ್ರದಲ್ಲಿ ಸೂಚಿಸಿ ಪತ್ರ ರವಾನಿಸಿದ್ದಾರೆ.