ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾನು ಮುಸ್ಲಿಮರ ಮತಗಳಿಂದ ಗೆದ್ದಿಲ್ಲ, ಸಾಬ್ರ ಕೆಲಸ ಮಾಡಬೇಡಿ ಎಂದು ಕಾರ್ಪೋರೇಟರ್ ಗೆ ತಿಳಿಸಿದ್ದೇನೆ ಎಂದು ವಿಜಯಪುರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ವಿಡಿಯೂ ವೈರಲ್ ಆಯಿತು ಇದನ್ನು ಕಂಡ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ..

ಯತ್ನಾಳ್ ಅವರಿಗೆ ಬಿ.ಎಸ್. ಯಡಿಯೂರಪ್ಪ ಕರೆ ಮಾಡಿ, ಇಂತಹ ಹೇಳಿಕೆ ಕೊಡುವುದು ಸರಿಯಲ್ಲ, ಯಾವುದೇ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ, ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ ಎಂದು ಸೂಕ್ಷ್ಮವಾಗಿ ಯತ್ನಾಳ್ ಗೆ ಸಲಹೆ ನೀಡಿದ್ದಾರಂತೆ.