ವಿಜಪುರ: ಯಡಿಯೂರಪ್ಪನವರನ್ನು ಕೆಳಗಿಳಿಸಲು ಇಬ್ಬರು ಕೇಂದ್ರ ನಾಯಕರು ಮಸಲತ್ತು ನಡೆಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಯಡಿಯೂರಪ್ಪನರಿಗೆ 76 ವಯಸ್ಸಾಗಿದೆ. ಅವರಿಂದ ರಾಜೀನಾಮೆ ಪಡೆಯಿರಿ ಎಂದು ಆ ಇಬ್ಬರು ಕೇಂದ್ರ ಸಚಿವರು ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹೇರಿದ್ದಾರೆ. ಅದೇ ನಾಯಕರು ಪಿಎಂ ಮೋದಿ ಭೇಟಿ ಮಾಡುವ ನನ್ನ ಯತ್ನಕ್ಕೆ ಅಡ್ಡಿ ಪಡಿಸಿದ್ದಾರೆ. ಇಂತಹವರಿಂದಲೇ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.