ಶಿವಮೊಗ್ಗ: ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಖಜಾನೆ ಸಂಸದೆ ಶೋಭಾ ಕರಂದ್ಲಾಜೆ ಬಳಿ ಇದೆ ಅಂತ ಬಾಂಬ್ ಸಿಡಿಸಿದ್ದು ಮಾಜಿ ಶಾಸಕ ಶಾಸಕ ಬೇಳೂರು ಗೋಪಾಲಕೃಷ್ಣ.!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆ ಐಟಿ ದಾಳಿ ನಡೆಯುತ್ತಿದೆ. ಆದರೆ ಶೋಭಾಕರಂದ್ಲಾಜೆ ಮನೆ ಮೇಲೆ ಏಕೆ ದಾಳಿ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

ಯಡಿಯೂರಪ್ಪ ಅವರು ಅಧಿಕಾರ ಹಿಡಿಯಲು ಎಸ್.ಬಂಗಾರಪ್ಪ ಅವರು ಕಾರಣರಾಗಿದ್ದರು. ಇದೇ ಯಡಿಯೂರಪ್ಪ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೋಲಲು ಕಾರಣರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಹಣಬಲ ಗೆದ್ದಿದೆ. ಇದಕ್ಕೆ ಬಿಎಸ್‍ವೈ ಅವರ ಹಣವೇ ಕಾರಣ ಎಂದು ಹೇಳಿದ ಅವರು, ಯಡಿಯೂರಪ್ಪ ಅವರು ಕೇವಲ ಲಿಂಗಾಯತ ಸಮಾಜದವರಿಗೆ ಅಧಿಕಾರ ನೀಡಿದ್ದಾರೆ. ಬ್ರಾಹ್ಮಣ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದ ಜೊತೆಗೆ ಹಣದ ವಿಷಯ ಪ್ರಸ್ಥಾಪ ಮಾತ್ರ ಸಂಚಲನ ಸೃಷ್ಠಿಸಿದೆ.