ಬೆಂಗಳೂರು: ಯಡಿಯೂರಪ್ಪ ಸಿಎಂ ಆಗಿರುವವರಿಗೆ ನಾನು ಸಚಿವನಾಗಲಾರೆ. ಈ ವಿಷಯವನ್ನು ಅವರ ಮುಂದೆಯೇ ಹೇಳಿದ್ದೇನೆ ಎಂದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಮ್ಮ ನಾಯಕರು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರು ಮಾತ್ರ. ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಮುಖ್ಯಮಂತ್ರಿ ಅಷ್ಟೇ. ಅವರು ಮುಂದಿನ 3 ವರ್ಷ ಸಿಎಂ ಆಗಿರುತ್ತಾರೋ, ಇಲ್ಲವೋ ಗೊತ್ತಿಲ್ಲ. ನಾನು ಜ್ಯೋತಿಷಿ ಅಲ್ಲ. ಆದರೆ ಸರ್ಕಾರ ಇರಲಿದೆ. ನಾನು ಯಾರ ಬಳಿಯೂ ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ ಎಂದರು.