ಬೆಂಗಳೂರು: ಇತ್ತೀಚೆಗಷ್ಟೆ ದೈವಾದೀನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಯನ್ನು ಪಡೆಯಲು ನವದೆಹಲಿಗೆ ತೆರಳಿದ್ದ ಯಡಯೂರಪ್ಪ ಖುದ್ದು ಮೋದಿ ಅವರಿಂದಲೇ ಅಸ್ತಿಯ ಕಳಶ ಪಡೆದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಭೇಟಿ ಮಾಡಿದ್ದರೂ ಸಹ ಯಡಿಯೂರಪ್ಪ ಅವರು ಕೊಡಗು ವಿಷಯ ಮಾತನಾಡಿಲ್ಲ.

ಏಕೆಂದ್ರೆ  ಭೇಟಿ ಮಾಡಿದ್ರು ಆದರೆ ಕೊಡಗು ವಿಷಯ ಪ್ರಸ್ತಾಪಿಸಲಿಲ್ಲ. ಈ ವಿಷಯವನ್ನು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಮೋದಿ ಅವರನ್ನು ಭೇಟಿ ಆಗಿದ್ದೆನಾದರೂ ಕೊಡಗಿನ ವಿಷಯ ಪ್ರಸ್ತಾಪಿಸಲು ಸಮಯಾವಕಾಶ ಸಿಗಲಿಲ್ಲ ಎಂದು ಯಡಿಯೂರಪ್ಪ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.