ಬಾಗಲಕೋಟೆ: ಸಿಎಂ ಯಡಿಯೂರಪ್ಪನವರ ಭ್ರಷ್ಟಾಚಾರ ಮಾತ್ರ ಅಲ್ಲ.  ನೋಡಲು ಆಗದಂಥ ಸಿಡಿಗಳೂ ಇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಆರೋಪ ಮಾಡಿದ್ದಾರೆ.

ನಾನು ಮೌಲ್ಯಾದಾರಿತ ರಾಜಕಾರಣವನ್ನು ಮಾಡುತ್ತಿದ್ದೇನೆ. ನನ್ನ ಬಳಿ 3 ಜನ ಬಂದಿದ್ರು. ಅವರ ಬಳಿ ಸಿಡಿಗಳಿವೆ. ಸಿಡಿಗಳನ್ನೆಲ್ಲ ಇಟ್ಟುಕೊಂಡು ಆಟವಾಡುವ ವ್ಯಕ್ತಿ ನಾನಲ್ಲ. ಅಂಥಾ ಸಿಡಿ ಇಟ್ಕೊಂಡು ನಾನು ಆಟವಾಡುವವನಾಗಿದ್ದರೆ ನಾನಿಂದು ಡಿಸಿಎಂ ಆಗ್ತಿದ್ದೆ ಎಂದಿದ್ದಾರೆ.

ಡಿಕೆಶಿ, ಜಾರ್ಜ್, ಜಮೀರ್ ಅಹ್ಮದ್ ಬಳಿಯೂ ಆ ಸಿಡಿಗಳಿವೆ. ನೀವು ಯಡಿಯೂರಪ್ಪ, ವಿಜಯೇಂದ್ರನವರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿಲ್ಲ ಎಂದಾದರೆ ಆ ಸಿಡಿ ಬಹಿರಂಗಗೊಳಿಸಿ ಎಂದಿದ್ದಾರೆ.

ಆದರೆ  ಕಾಂಗ್ರೆಸ್ ನವರಿಗೆ ನೈತಿಕತೆ ಇದ್ದರೆ, ನಿಜವಾದ ವಿಪಕ್ಷ ಸ್ಥಾನದಲ್ಲಿ ಅವರು ಇದ್ದರೆ ಆ ಸಿಡಿಗಳನ್ನು ರಿಲೀಸ್ ಮಾಡಲಿ ಎಂದು ಸವಾಲು ಹಾಕಿದರು.!