ಬೆಂಗಳೂರು: ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋಗಬೇಡಿ, ನಿಮಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತೇವೆ. ಇಲ್ಲೇ ಉಳಿದುಕೊಂಡು ರಾಜ್ಯದ ಆರ್ಥಿಕತೆ ಪುನಾರಂಭಕ್ಕೆ ಸಹಾಯ ಮಾಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೊರೋನಾ  ಹರಡುವಿಕೆ ನಿಯಂತ್ರಣದಲ್ಲಿದೆ. ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತೆ. ಆದಷ್ಟೂ ಬೇಗ ಕಟ್ಟಡ ನಿರ್ಮಾಣ ಕೆಲಸ, ಇತರೆ ಕೈಗಾರಿಕೆ ಕೆಲಸ ಆರಂಭಿಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.