ಉಡುಪಿ: ಮೋದಿ ಇಲ್ಲದಿದ್ದರೆ ದೇಶಕ್ಕೆ ರಕ್ಷಣೆಯೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ತುಂಬ ತಿಳಿವಳಿಕೆ ಇರುವ ನೀವೇಕೆ ಮೋದಿಯನ್ನು ಬೆಂಬಲಿಸುತ್ತೀರಿ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ನಿಮಗೆ ಪಳಪಳ ಹೊಳೆಯುವ ಮೋದಿ ಮುಖವೇ ಇಷ್ಟವಾಗುತ್ತದೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಓಡಾಡಿ ಒಮ್ಮೆ ಮುಖ ತೊಳೆದರೆ ಮತ್ತೆ ನಾಳೆಯೇ ಮುಖ ತೊಳೆಯೋದು. ಹಾಗಾಗಿ ನಾನು ನಿಮಗೆ ಇಷ್ಟವಾಗೋದಿಲ್ಲ, ಮೋದಿ ಮುಖ ಇಷ್ಟವಾಗತ್ತೆ. ದಿನಕ್ಕೆ ಒಂದು ಬಾರಿ ತೊಳೆಯುವ ನಮ್ಮ ಮುಖ ಇಷ್ಟವಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.