ಮೈಸೂರು: ನರೇಂದ್ರ ಮೋದಿ ಪ್ರಜಾಪ್ರಭುತ್ವಕ್ಕೆ ಮಾರಕ. ಮತ್ತೊಮ್ಮೆ ಪ್ರಧಾನಿ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

ಮೋದಿ ಪ್ರಜಾಪ್ರಭುತ್ವಕ್ಕೆ ಮಾರಕ, ಮತ್ತೊಮ್ಮೆ ಪ್ರಧಾನಿಯಾದರೆ ಮತ್ತೆಂದೂ ಚುನಾವಣೆಗಳೇ ನಡೆಯುವುದಿಲ್ಲ ಎಂದರು.

 

ಮತಾಂಧ ಅನಂತಕುಮಾರ್ಹೆಗ್ಡೆ ಎಂಬಾತ ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಾನೆ. ಕೇಂದ್ರ ಸಚಿವನೊಬ್ಬ ರೀತಿಯ ಹೇಳಿಕೆ ನೀಡುತ್ತಾನೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ಶಾ ಅವರ ಕುಮ್ಮಕ್ಕು ಇದೆ ಎಂದೇ ಅರ್ಥ ಅಲ್ಲವೆ ಎಂದು ಜನರಿಗೆ ಪ್ರಶ್ನೆ ಹಾಕಿದರು.!