ಚಿತ್ರದುರ್ಗ: 9 ರಂದು ಪ್ರಧಾನಿ ಮೋದಿ ಚಿತ್ರದುರ್ಗದ ಸಮಾವೇಶ ಬಂದಾಗ ಅವರ ಹೆಲಿಕಾಪ್ಟರ್​ನಿಂದ ಇಳಿಯುತ್ತಿದ್ದಂತೆ ಅವರ ಭದ್ರತಾ ಸಿಬ್ಬಂದಿಗಳು ಒಳಗಿನಿಂದ ಒಂದು ಕಪ್ಪು ಪೆಟ್ಟಿಗೆಯನ್ನು ಹೊರತೆಗೆದಿದ್ದರು ಅಲ್ಲದೆ ಆ ಪೆಟ್ಟಿಗೆಯನ್ನು ತಕ್ಷಣ ಒಂದು ಇನ್ನೋವಾ ಕಾರ್​ಗೆ ಹಾಕಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮದವರ ಮುಂದೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಏನಪ್ಪ ಅಂದ್ರೆ

ಚುನಾವಾಣಾ ಆಯೋಗದ ಮಾರ್ಗಸೂಚಿಯಂತೆ ಪ್ರಧಾನಮಂತ್ರಿ ಗಳು ಹಾಗೂ ಭಯೋತ್ಪಾದಕರಿಂದ ಜೀವ ಬೆದರಿಕೆ ಇರುವ ರಾಜಕೀಯ ನಾಯಕರ ಹೆಲಿಕಾಪ್ಟರ್ ಹಾಗೂ ವಿಮಾನಗಳ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ.

ಇದರನ್ವಯ ಪ್ರಧಾನಮಂತ್ರಿ ಹಾಗೂ ರಾಜೀವ್ ಗಾಂಧಿಯವರ ಹೆಲಿಕಾಪ್ಟರ್ ಅನ್ನು FST ತಂಡ ತಪಾಸಣೆ ಮಾಡಿಲ್ಲ.  ಉಳಿಸಂತೆ ಜಿಲ್ಲೆಯಲ್ಲಿ ಅನುಮತಿ ನೀಡಲಾಗಿದ್ದ ಎಲ್ಲ ಹೆಲಿಕಾಪ್ಟರ್ ಗಳನ್ನು FST ತಂಡ ತಪಾಸಣೆ ಗೆ ಒಳಪಡಿಸಿದೆ . ಹೀಗಾಗಿ ಯಾವುದೇ ನಿಯಮಗಳ ಉಲ್ಲಂಘನೆ ಜಿಲ್ಲೆಯಲ್ಲಿ ಆಗಿಲ್ಲ ಎಂದು ಜಿಲ್ಲಾಧಿಕಾರಿ ಗಳು ದಾಖಲೆಯೊಂದಿಗೆ ಸ್ಪಷ್ಟನೆ ನೀಡಿದ್ದಾರೆ.