ಚಿತ್ರದುರ್ಗ: ದುರ್ಗದ ಜಿಲ್ಲೆಯಲ್ಲಿ ಮೊಳಕಾಲ್ಮೂರು ಕ್ಷೇತ್ರ ಅತ್ಯಂತ ಪ್ರತಿಷ್ಠಿತ ಕಣವಾಗಿದ್ದು, ಗಣಿರೆಡ್ಡಿ ಜನಾರ್ಧನ ರೆಡ್ಡಿ ತನ್ನ ಆಪ್ತ ಶ್ರೀರಾಮುಲು ಅವರನ್ನು ಗೆಲ್ಲಿಸಲು ಹೊಸ ತಂತ್ರವನ್ನು ಎಣೆದಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗುವುದಕ್ಕೆ ಆಪರೇಷನ್ ಕಮಲವನ್ನು ಹುಟ್ಟುಹಾಕಿದ್ದೇ ಈ ಬಳ್ಳಾರಿಯ ಗಣಿರೆಡ್ಡಿಗಳು ಎಂಬುದನ್ನು ಯಾರು ಮರೆಯುವಂತ್ತಿಲ್ಲ.!

ಆದ್ರೆ ಈ ಬಾರಿ ಜನಾರ್ಧನರೆಡ್ಡಿ ಆಪ್ತ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವುದರಿಂದ ಯಾವುದೇ ಕಾರಣಕ್ಕೂ ಶ್ರೀರಾಮುಲು ಸೋಲಬಾರದೆಂದು ಸ್ಥಳೀಯ ಸಂಸ್ಥೆಯಿಂದ ಚುನಾಯಿತದವರನ್ನು ಆಪರೇಷನ್ ಕಮಲದ ಮೂಲಕ ಶ್ರೀರಾಮುಲು ಅವರನ್ನು ಗೆಲ್ಲಿಸಲು  ಸ್ಕೆಚ್ ರೆಡಿಮಾಡಿದ್ದಾರೆ. ಏಕೆಂದ್ರೆ ಶ್ರೀರಾಮುಲು ಅವರಿಗೆ ಪ್ರತಿ ಸ್ಪರ್ಧಿ ಹಾಲಿ ಶಾಸಕ ತಿಪ್ಪೇಸ್ವಾಮಿ. ಹಾಗಾಗಿ ಆಪರೇಷನ್ ಕಮಲದ ಮೂಲಕ ತಿಪ್ಪೇಸ್ವಾಮಿಗೆ ಸೋಲಿನ ರುಚಿ ತೋರಿಸಲು ಸಿದ್ದರಿದ್ದಾರೆಂಬ ಸುದ್ದಿ. ಆದ್ರೆ ಮತದಾರರು ಯಾರ ಪರವಾಗಿರುತ್ತಾರೆ ಎಂಬುದು ಗೊತ್ತಾಗುವುದು ಮತ ಎಣಿಕೆ ನಂತರೇ.!