ದಾವಣಗೆರೆ: ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6, 7, 8, 9 ಮತ್ತು 10ನೇ ತರಗತಿಯವರಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಹರಿಹರ ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೆರೆಬಿಳಚಿ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು ಈ ಶಾಲೆಗಳಲ್ಲಿ ಬೋಧಿಸಲು ಕನ್ನಡ ಶಿಕ್ಷಕರು, ವಿದ್ಯಾರ್ಹತೆ: ಬಿ.ಎ & ಬಿ.ಇಡಿ (ಐಚ್ಚಿಕ ವಿಷಯ ಕನ್ನಡ), ಹುದ್ದೆಗಳ ಸಂಖ್ಯೆ:03. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಂಡಜ್ಜಿ ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು ಭೋಧಿಸುವ ವಿಷಯ ಇಂಗ್ಲೀಷ್ ಶಿಕ್ಷಕರು, ವಿದ್ಯಾರ್ಹತೆ: ಬಿ.ಎ & ಬಿ.ಇಡಿ (ಐಚ್ಚಿಕ ವಿಷಯ ಇಂಗ್ಲಿಷ್), ಹುದ್ದೆಗಳ ಸಂಖ್ಯೆ:03.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೆರೆಬಿಳಚಿ ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು. ಭೋಧಿಸುವ ವಿಷಯ ಹಿಂದಿ ಶಿಕ್ಷಕರು, ವಿದ್ಯಾರ್ಹತೆ: ಬಿ.ಎ & ಬಿ.ಇಡಿ (ಐಶ್ಚಿಕ ವಿಷಯ ಹಿಂದಿ), ಹುದ್ದೆಗಳ ಸಂಖ್ಯೆ:02. ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಜಗಳೂರು ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು ಭೋಧಿಸುವ ವಿಷಯ ಗಣಿತ ಶಿಕ್ಷಕರು, ವಿದ್ಯಾರ್ಹತೆ: ಎಂ.ಎಸ್ಸಿ & ಬಿ.ಎಡ್(ಪಿ.ಸಿ.ಎಂ.ಬಿ) ಹುದ್ದೆಗಳ ಸಂಖ್ಯೆ:02.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು. ಭೋಧಿಸುವ ವಿಷಯ ವಿಜ್ಞಾನ ಶಿಕ್ಷಕರು, ವಿದ್ಯಾರ್ಹತೆ: ಬಿ.ಎಸ್ಸಿ & ಬಿ.ಎಡ್(ಸಿ.ಬಿ. ಜೆಡ್) ಹುದ್ದೆಗಳ ಸಂಖ್ಯೆ:01. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಗಳೂರು ಬೋಧಿಸುವ ವಿಷಯ ಸಮಾಜವಿಜ್ಞಾನ ಶಿಕ್ಷಕರು, ವಿದ್ಯಾರ್ಹತೆ: ಬಿ.ಎ & ಬಿ.ಇಡ್(ಇತಿಹಾಸ) ಹುದ್ದೆಗಳ ಸಂಖ್ಯೆ:01. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 8296909570, 9008815296, 8746818180, 9036866642, ನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.