ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಹುಮತ ಸಿಗದ ಕಾರಣ ಉಭಯ ನಾಯಕರು ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅದರ ಉಳಿವಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭವಿಷ್ಯವೊಂದನ್ನು ಹೇಳಿದ್ದರು ಅದು ನಿಜವಾಗಿದೆಯಂತೆ.!

ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿಗೆ ಬಂದಿದ್ದ ಸಿದ್ದರಾಮಯ್ಯರು ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರ ನಡೆಯಲಿದೆ, ಆ ನಂತರ ಕಷ್ಟ ಎಂದು ಹೇಳಿದ್ದರು. ಅವರು ಹೇಳಿದಂತೆ ಲೋಕಸಭಾ ಚುನಾವಣೆ ನಂತರ ದೋಸ್ತಿ ಸರಕಾರ ಪತನವಾಗಿದೆ.!