ಮಂಡ್ಯ: ಮೊದಲು ಬಿಜೆಪಿ, ಈಗ ಕಾಂಗ್ರೆಸ್​​​, ಮುಂದೆ ನನ್ನನ್ನು ಜೆಡಿಎಸ್​​ ಅಭ್ಯರ್ಥಿ ಎಂದರೂ   ಅಚ್ಚರಿಯಿಲ್ಲ ಎಂದು ಸುಮಲತಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು,ನಾನು ಮಂಡ್ಯ ಜನರಿಗಾಗಿ ಸ್ಪರ್ಧಿಸುದ್ದೇನೆ ಜನ ಹೇಳಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಚುನಾವಣೆ ಮುಗಿದ ಕೂಡಲೇ ನಾನು ಬಿಜೆಪಿ ಸೇರುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.