ಬೆಂಗಳೂರು: ಮೈಸೂರು ಹಾಲು ಉತ್ಪಾದಕರ ಸೊಸೈಟಿಗಳ ವಿವಿಧ ವರ್ಗಗಳ 193 ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ‌ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಅಂಕನಹಳ್ಳಿಯ ಡಿ.ಕೀರ್ತಿರಾಜ್ ಸೇರಿ 9 ಜನ ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಿ, ‘ಹುದ್ದೆಗಳ ನೇಮಕಕ್ಕೆ ನಡೆಸಲಾದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಮೊದಲು 168 ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿ, ಬಳಿಕ ಹೆಚ್ಚುವರಿ 25 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಇದು ಕಾನೂನು ಬಾಹಿರ ಕ್ರಮ’ ಎಂದು ದೂರಿದ್ದರು.