ಮೈಸೂರು: ಮೈಸೂರಿನಲ್ಲಿ ಕೊರೋನಾ ಕೇಸ್ ದಿನೇ ದಿನೆ ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ತುಸು ಎಚ್ಚರ ತಪ್ಪಿದರೂ ಜಂಬೂ ಸವಾರಿ ಹೋಗಿ ಬಂಬೂ ಸವಾರಿ ಆದೀತು ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಎಚ್ಚರಿಸಿದ್ದಾರೆ.

ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರೆ ಸಾಕು. ಯಾವುದೇ ಕಾರ್ಯಕ್ರಮ ಬೇಡ. 2 ಸಾವಿರ ಎಂದರೂ ರಾಜಕೀಯದವರು, ಅಧಿಕಾರಿಗಳ ಕುಟುಂಬದವರು ಸೇರಿ ಅಂದು 10 ಸಾವಿರ ಆಗುತ್ತಾರೆ. ಅದಕ್ಕಾಗಿ ಎಚ್ಚರವಹಿಸಿ ಈಗಲೇ ಆಸ್ಪತ್ರೆ ಸಿದ್ಧಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.!