ಮೈಸೂರು: ಡಾ. ರಾಜ್ ಕುಮಾರ್ ಮೊಮ್ಮಗ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್​​ನಲ್ಲಿ ನಡೆಯಿತು.

ಗುರು ರಾಜ್ ಕುಮಾರ್ ಇತ್ತೀಚೆಗೆ ತಮ್ಮ ಹೆಸರನ್ನು ಯುವ ರಾಜ್ ಕುಮಾರ್ ಎಂದು ಬದಲಿಸಿಕೊಂಡಿದ್ದರು. ಮೈಸೂರು ಮೂಲದ ಶ್ರೀದೇವಿ ಎಂಬುವರೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿತು. ಡಾ. ರಾಜ್ ಆಪ್ತರು, ಸಿನಿಮಾ ರಂಗದ ಗಣ್ಯರು ಹಾಗೂ ಸ್ನೇಹಿತರು ಈ ಸಮಾರಂಭದಲ್ಲಿ ಹಾಜರಿದ್ದು ಜೋಡಿಗಳಿಗೆ ಶುಭ ಹಾರೈಸಿದರು.