ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ , ಜಿಲ್ಲಾ ಹೆದ್ದಾರಿ, ಹಾಗೂ ಗ್ರಾಮೀಣ ಹೆದ್ದಾರಿಗಳಲ್ಲಿ ಹೋಗುವಾಗ ಮೈಲುಗಲ್ಲುಗಳು ಕಾಣುತ್ತವೆ. ಆದರೆ ಪ್ರತಿಯೊಂದು ಹೆದ್ದಾರಿಯ ಕಲ್ಲುಗಳಿಗೆ ಒಂದೊಂದು ರೀತಿಯ ಬಣ್ಣ ಬಳಿಯಲಾಗುತ್ತದೆ .

ಆ ಬಣ್ಣಗಳ ಬಗ್ಗೆ ಇಲ್ಲೊಂದು ಪುಟ್ಟ ಮಾಹಿತಿ. ರಾಷ್ಟ್ರೀಯ ಹೆದ್ದಾರಿಗೆ ಹಳದಿ ಮತ್ತು ಬಿಳಿ ಬಣ್ಣ, ರಾಜ್ಯ ಹೆದ್ದಾರಿಗೆ ಹಸಿರು ಮತ್ತು ಬಿಳಿ, ಜಿಲ್ಲಾ ಹೆದ್ದಾರಿಗೆ ಕಪ್ಪು ಮತ್ತು ಬಿಳಿ ಹಾಗೂ ಗ್ರಾಮೀಣ ಹೆದ್ದಾರಿಗೆ ಕೇಸರಿ ಮತ್ತು ಬಿಳಿ ಬಣ್ಣ ಬಳಿಯಲಾಗುತ್ತದೆ.!