ಬೆಂಗಳೂರು : ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿನ ಹೊಣೆಯನ್ನು ಸಚಿವರ ಹೆಗಲಿಗೆ ಹೊರಿಸಲಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೈ ಸಚಿವರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೂ ಎಲ್ಲ ಸಚಿವರಿಗೂ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ.

ಈ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ  ಮುಂದಾಗಬೇಕಿದೆ.  ಚಿತ್ರದುರ್ಗ-ವೆಂಕಟರಮಣಪ್ಪ, ತುಮಕೂರು-ಡಿಸಿಎಂ ಡಾ.ಜಿ.ಪರಮೇಶ್ವರ್,  ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಮಾಲಾ, ಮಂಗಳೂರು-ಯು.ಟಿ.ಖಾದರ್, ಉತ್ತರ ಕನ್ನಡ -ಆರ್.ವಿ.ದೇಶಪಾಂಡೆ, ಬಾಗಲಕೋಟೆ-ಆರ್ ಬಿ ತಿಮ್ಮಾಪುರ ಬೆಂಗಳೂರು ದಕ್ಷಿಣ/ಕೇಂದ್ರ/ ಹಾವೇರಿ-ಜಮೀರ್ ಅಹ್ಮದ್, ಚಾಮರಾಜನಗರ -ಪುಟ್ಟರಂಗಶೆಟ್ಟಿ, ವಿಜಯಪುರ-ಶಿವಾನಂದ ಪಾಟೀಲ, ಉಸ್ತುವಾರಿ ಸಚಿವರ ಹೆಗಲಿಗೆ ಹಾಕಲಾಗಿದೆ.