ಬೆಂಗಳೂರು: ಭಾನುವಾರ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷನಾಗಿ ಮೇ 31ರಂದು ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದೆ. ಆದರೆ ಎಲ್ಲ ಭಾನುವಾರಗಳಂದು ಕರ್ಫ್ಯೂ ಎಂದು ಸಿಎಂ ಘೋಷಿಸಿರುವುದರಿಂದ ಬೇರೊಂದು ದಿನ ಸಾಂಕೇತಿಕವಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ‘ ಶೀಘ್ರದಲ್ಲೇ ಸಾಂಕೇತಿಕವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಅಧಿಕಾರ ಸ್ವೀಕರಿಸುತ್ತೇನೆ’ ಎಂದರು.