ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಾಥಮಿಕ ಹಂತದ ಅನುಮತಿ ನೀಡಿದೆ.

ಇದರಿಂದ ತಮಿಳುನಾಡು ವಿರುದ್ಧ ರಾಜ್ಯಕ್ಕೆ ಪ್ರಾಥಮಿಕ ಜಯ ದೊರೆತಿದೆ. ಯೋಜನೆಯ ಸಾಧ್ಯತೆ ವರದಿ ಬಗ್ಗೆ ಸಹಮತ ವ್ಯಕ್ತಪಡಿಸಿರುವ ಕೇಂದ್ರ ಜಲ ಆಯೋಗವು ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.