ಕೊಪ್ಪಳ: ಮೆಕ್ಕೆಜೋಳ ಬೆಳೆದು ಸಂಕಷ್ಟದಲ್ಲಿರುವ ರೈತರ ಖಾತೆಗೆ ಸರ್ಕಾರ ಐದು ಸಾವಿರ ರೂ. ಪರಿಹಾರ ಜಮೆ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ರಾಜ್ಯದಲ್ಲಿ ರೈತರು ಕಳೆದ ಬಾರಿ ಮುಂಗಾರಿನಲ್ಲಿ 45,25,185 ಕ್ವಿಂಟಲ್‌, ಹಿಂಗಾರಿನಲ್ಲಿ 6,97,597 ಕ್ವಿಂಟಲ್‌ ಮೆಕ್ಕೆಜೋಳ ಬೆಳೆದಿದ್ದಾರೆ. ಈ ರೈತರಿಗೆ ತಲಾ ಐದು ಸಾವಿರ ರೂ. ಪರಿಹಾರ ಬರಲಿದೆ. ಇದಕ್ಕೆ ಮಾರ್ಗಸೂಚಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.