ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಸೇರಿದಂತೆ, ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಂಡ್ಯ ಸಂಸದ ಪುಟ್ಟರಾಜು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಇವರು ಸ್ಪರ್ಧಿಸಿದ್ದ ಇವರು ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಂಸಕ್ಕೆ ರಾಜೀನಾಮೆ ನೀಡಿದ್ದಾರೆ.

ಆದ್ರೆ ಈ ಮೂವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ, ಇವರಿಂದ ತೆರವಾದ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಯಾವಾಗ ಆಗುತ್ತೆ. ಅಥವಾ  ಹೇಗಿದ್ದರೂ ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಇರುವುದರಿಂದ ಅಲ್ಲಿಯವರೆಗೂ ಚುನಾವಣೆ ನಡೆಯುವುದಿಲ್ಲವೆ ಎಂಬ ಚರ್ಚೆ ಶುರುವಾಗಿದೆ ಯಾವುದಕ್ಕೂ ಕಾದು ನೋಡಬೇಕು.!