ಬೆಳಗಾವಿ: ಮೂಲಭೂತವಾದಿ ಸಂಘಟನೆಗಳು ಭಗತ್ ಸಿಂಗ್ ಹಾಗೂ ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡಿಕೊಂಡಿವೆ ಎಂದು ಸಾಹಿತಿ ಡಾ.ಬರಗೂರ ರಾಮಚಂದ್ರಪ್ಪ ಹೇಳಿದರು..

ಸ್ಮಶಾನದಲ್ಲಿ ಅಂಬೇಡ್ಕರ ಪರಿನಿರ್ವಾಣ ದಿನದ ಅಂಗವಾಗಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ ಮೌಢ್ಯ ವಿರೋಧಿ ಪರಿವರ್ತನಾ ದಿನದಲ್ಲಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ, ಓಟಿಗಾಗಿ ಅಂಬೇಡ್ಕರ್ ಅಪಹರಣವಾಗುತ್ತಿದ್ದು, ಇವರನ್ನು ಬಿಡುಗಡೆಗೊಳಿಸುವ ಕೆಲಸ ನಡೆಯಬೇಕಿದೆ. ಓಟಿಗಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುತ್ತಿರುವ ಮೂಢರಿಗೆ ಅವರ ಶಬ್ದ ಕೂಡ ಗೊತ್ತಿರಲಿಲ್ಲ ಎಂದರು.

(ಸಾಂದರ್ಭಿಕ ಚಿತ್ರ)