ಚಿತ್ರದುರ್ಗ: ಶೂನ್ಯಪೀಠಾಧ್ಯಕ್ಷರು, ಎಲ್ಲಾ ಸಮುದಾಯದಕ್ಕೆ ಸ್ವಾಮೀಜಿಗಳನ್ನು ದೀಕ್ಷೆ ಕೊಟ್ಟವರು. 12 ನೇ ಶತಮಾನದ ಅನುಭವ ಮಂಟಪದಂತೆ ಇರಬೇಕೇಂದು ಆಶಯ ಪಟ್ಟ ಶರಣರು, ಇಂದು ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷೆಯ 20ನೇ ವಾರ್ಷಿಕೋತ್ಸವ, ಪಟ್ಟಾಕಾರದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಅಂತರಂಗದ ಮಾತುಗಳನ್ನು ಹೇಳಿದ್ದಾರೆ.
ಎಲ್ಲವನ್ನೂ ಮುರುಘ ಶರಣರೇ ಮಾಡಲು ಸಾಧ್ಯವಿಲ್ಲ, ಹಾಗಾಗಿ ಕುಲಕ್ಕೊಬ್ಬ ಕಾವಿಧಾರಿಯನ್ನು ನೇಮಿಸಲಾಯಿತು. ಆ ಮೂಲಕ ಎಲ್ಲಾ ಜನಾಂಗಗಳ ಅಭಿವೃದ್ಧಿ ಆಗುತ್ತಿರುವುದು ಉತ್ತಮ ಬೆಳವಣಿಗೆ. ಇಮ್ಮಡಿ ಸ್ವಾಮೀಜಿ ಅವರು ಜನಮುಖಿ ಕಾರ್ಯಕ್ರಮ ಮಾಡುತ್ತಿರುವುದು ನಮಗೆಲ್ಲಾ ಪ್ರೇರಣೆ ಆಗಿದೆ. ದೀಕ್ಷೆ ಕೊಟ್ಟಂತ ನಮ್ಮ ಮೇಲೆ ಎಲ್ಲಿಲ್ಲದ ಗೌರವ. ಇನ್ನು ಕೆಲ ಸ್ವಾಮಿಗಳು ದೀಕ್ಷಾ ಗುರುಗಳ ಹೆಸರನ್ನ ಹೇಳಕ್ಕೇ ಸಂಕೋಚ ಪಡುತ್ತಾರೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ದೀಕ್ಷಾ ಗುರುಗಳನ್ನ ನೆನಪಿಸಿಕೊಂಡು ಅವರ ಮೇಲೆ ನಿಷ್ಠೆ ಇಟ್ಟುಕೊಂಡು ಹೋಗುವ ಅನೇಕ ಸ್ವಾಮಿಗಳಲ್ಲಿ ನಿಮ್ಮ ಸ್ವಾಮಿಗಳು ಮೊದಲಿಗರಾಗಿದ್ದಾರೆ ಎಂದು ತಿಳಿಸಿದರು.
ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನ ಮರೆಯಬಾರದು. ಯಾರು ದೀಕ್ಷೆ ಕೊಟ್ಟು ಸ್ವಾಮಿಗಳನ್ನಾಗಿ ಮಾಡಿದ್ದಾರೆ, ಯಾರು ಸಾಮಾಜಿಕವಾದ ಐಡೆಂಟಿಫಿಕೇಷನ್ ತಂದು ಕೊಟ್ಟರು ಎಂಬುದನ್ನ ಕೂಡ ಮರೆಯಬಾರದು. ಇವತ್ತಿನ ಹಣ, ಅಕಾರ, ಅಂತಸ್ತು ಎಲ್ಲ ಬಂದ ಮೇಲೆ ದೀಕ್ಷೆಕೊಟ್ಟ ಮಠ, ಗುರುಗಳನ್ನ ಯಾರು ತಿರಸ್ಕಾರ ಮಾಡುತ್ತಾರೆ ಅಂತಹವರಿಗೆ ಉತ್ತಮ ಭವಿಷ್ಯ ಇಲ್ಲ ಎಂದು ಹೇಳಿದರು.
ಗುರುಗಳು ಮತ್ತು ಆದರ್ಶವನ್ನ ಯಾವತ್ತಿಗೂ ಹೃದಯದಲ್ಲಿ ಇಟ್ಟುಕೊಂಡು ಅವರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು. ಇದು ಗುರುಶಿಷ್ಯರ ಅವಿನಾಭಾವ ಸಂಬಂಧವಾಗಿದೆ. ಗುರುವಿನ ನಿಷ್ಠೆಯನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಏನೇ ಸಂಕುಚಿತ ಭಾವನೆಗಳಿದ್ದರೂ ಅದನ್ನು ತೋರ್ಪಡಿಸಬಾರದು ಎಂದು ಹೇಳಿದ್ದು ಕೆಲ ಸ್ವಾಮೀಜಿಗಳಿಗೆ ಅರಗಿಸಿಕೊಳ್ಳಲು ಕಷ್ಟವಾಯಿತಂತ್ತೆ.!