ಚಿತ್ರದುರ್ಗದ ಐತಿಹಾಸ ಕೇಂದ್ರ ಬಿಂದುವಾಗಿರುವ ಚಂದ್ರವಳ್ಳಿಕೆರೆ, ಸಿಹಿನೀರುಹೊಂಡ, ಸಂತೆಹೊಂಡಗಳಿಗೆ ಜೈಪುರುದ ಮ್ಯಾಗ್ಸೆಸೆ ಪ್ರಶಸ್ತಿ ಪುರುಸ್ಕೃತರಾದ ಹಾಗೂ ಜಲಸಂಪನ್ಮೂಲ ತಜ್ಞರಾದ ಶ್ರೀ ರಾಜೇಂದ್ರ ಸಿಂಗ್ ರವರು ಮುರುಘಾ ಶರಣರೊಂದಿಗೆ ಭೇಟಿ ನೀಡಿದರು.

ಚಿತ್ರದುರ್ಗ ಕೋಟೆಗೆ ಮೆರಗು ನೀಡಿವ ಐತಿಹಾಸಿಕ ಜಲತಾಣಗಳ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿ ಇಂತಹ ಜಲತಾಣಗಳನ್ನು ಸಂರಕ್ಷಣೆಮಾಡಿ, ಐತಿಹಾಸಿಕ ಪ್ರವಾಸಿತಾಣಕ್ಕೆ ಮೆರುಗು ನೀಡಿ, ನೀರು ನಿಸರ್ಗದ ಅಮೂಲ್ಯ ಕೊಡಗೆ ಎಂದರು. ನೀರು ಜೀವನದ ಮೂಲವಲ್ಲ, ಜೀವನವೇ ಆದಾಗಿದೆ, ನೀರು ಮುಂದಿನ ಪೀಳಿಗೆಗೆ ನೀಡಬಹುದಾದ ಅಮೂಲ್ಯ ಕೊಡುಗೆ, ನೀರನ್ನು ಉಳಿಸಿದರೆ, ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ನೀರಿನ ಸಂರಕ್ಷಣೆ, ಮರು ಅಂತರ್ಜಲಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಯಲು ಸೀಮೆಯಾದ ಚಿತ್ರದುರ್ಗ ಜಿಲ್ಲೆ ಬರಗಾಲ ಪೀಡಿತ ಪ್ರದೇಶವಾಗಿದೆ, ಮಳೆ ಕಡಿಮೆ ಬಂದರೂ ಇಂತಹ ನೀರು, ಮಣ್ಣು ಸಂರಕ್ಷಣೆ ಹಾಗೂ ಸ್ವಚತೆ ಪ್ರತಿಯೊಬ್ಬರ ಕರ್ತವ್ಯ. ಇದೊಂದು ಜಾಗೃತಿಯಾಗಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವರ್ತಕರಾದ ಪಟೇಲ್ ಶಿವಕುಮಾರ್ ಹಾಗೂ ಶ್ರೀಮಠ ವ್ಯವಸ್ಥಾಪಕರಾದ ಪರಮಶಿವಯ್ಯನವರು ಉಪಸ್ಥಿತರಿದ್ದರು.