ಚಿತ್ರದುರ್ಗ: ಮುರುಘಾಮಠ ನೀಡುವ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಮೇಗೌಡರು, ನಾನು ಕಾಡಲ್ಲಿ ಜೀವಿಸಿದವನು. ನನಗೆ ಗಜ ವ್ಯಾಘ್ರ ಮೃಗ ಪಕ್ಷಿಗಳೇ ನನ್ನ ಬಳಗ. ಅಂತಹ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೋಡಲಾಗದೆ ಈ ರೀತಿಯ ಕಟ್ಟೆಗಳನ್ನು ನಿರ್ಮಿಸಿದೆ. ಹಳೆಯ ಕೆರೆ ಕಟ್ಟೆಗಳನ್ನು ಮುಚ್ಚುವುದು ಬೇಡ. ನಮ್ಮ ಮಕ್ಕಳಿಗೆ ಇರುವಂತೆ ಪ್ರಾಣಿ ಪಕ್ಷಿಗಳಿಗೂ ಸೌಕರ್ಯ ಬೇಡವೇ. ಪ್ರಾಣಿ ಪಕ್ಷಿಗಳಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಿ ಎಂದು ಮನ ಮುಟ್ಟುವಂತೆ ಮಾತನಾಡಿದರು.

 

ಮುರುಘಾಮಠದಲ್ಲಿ ನಡೆದ ಬಸವಶ್ರೀ ಪ್ರಶಸ್ತಿಯನ್ನು ಕಾಮೇಗೌಡರು ಪ್ರದಾನಮಾಡಿದ ಮುರುಘಾ ಶರಣರು ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ, ದಾರ್ಶನಿಕರ ಸ್ಮರಣೆ ಹಾಗೂ ನಿಸರ್ಗಪ್ರೇಮಿ ಕಾಮೇಗೌಡ ಅವರಿಗೆ ನೀಡಲಾಗಿದೆ ಎಂದರು.

ಬುದ್ಧನಿಂದ ಬದ್ಧತೆ, ಬಸವಣ್ಣನವರಿಂದ ಕಾಯಕ, ಸಮಾನತೆ, ಏಸುವಿನಿಂದ ಕ್ಷಮತೆಯನ್ನು ಕಲಿಯಬೇಕು. ಅದರಂತೆ ಮೊಹಮ್ಮದ್ ಪೈಗಂಬರ್ ಕಾಯಕ ಬದ್ಧತೆಯನ್ನು ಹೊಂದಿದ್ದರು ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ, ದಾರ್ಶನಿಕರ ಸ್ಮರಣೆ ಹಾಗೂ ನಿಸರ್ಗಪ್ರೇಮಿ ಕಾಮೇಗೌಡ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶ್ರೀಗಳು, ಶ್ರೀಮಠದ ಗೌರವಾನ್ವಿತ ಪ್ರತಿಷ್ಠಿತ ಪ್ರಶಸ್ತಿ ಬಸವಶ್ರೀ ಪ್ರಶಸ್ತಿ. ಈ ಸಾಲಿನ ಪ್ರಶಸ್ತಿಯನ್ನು ಕಾಮೇಗೌಡರಿಗೆ ನೀಡಲಾಗುತ್ತಿದೆ. ಅವರು ಅಪ್ರತಿಮ ಸಾಧಕರಾಗಿದ್ದಾರೆ. ನಾವು ಅನುಭವ ಮಂಟಪದಲ್ಲಿ ಸರ್ವಶರಣ, ಸಂತರ ಸ್ಮರಣೆಯನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಸಾಮಾಜಿಕ ಸಂದರ್ಭಕ್ಕೆ ಇದೊಂದು ಸ್ಮರಣೀಯ. ಇದನ್ನು ನೋಡಲು ದೃಷ್ಟಿ ಬೇಕು. ಇಂತಹ ಅಪರೂಪದ ದೃಷ್ಟಿ ಸೃಷ್ಟಿ ಮಾಡಿರುವುದು ಶ್ರೀಮಠದ ವಿಶೇಷ ಎಂದರು.

ಮುಖ್ಯಅತಿಥಿ ಡಾ. ಮಲ್ಲಣ್ಣ ಶಂಕ್ರಪ್ಪ ನಾಗರಾಳ ಮಾತನಾಡಿದರು. ನಂತರ ಶ್ರೀಗಳು ಸರ್ವ ಸಮಾಜಗಳ ಬಾಂಧವರೊಂದಿಗೆ ಭಾಗವಹಿಸಿ ಸಹಪಂಕ್ತಿ ಭೋಜನ ಮಾಡಿದರು.

ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಎಸ್.ಜೆ.ಎಂ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಈ. ಚಿತ್ರಶೇಖರ್ ಸ್ವಾಗತಿಸಿದರು. ಬೆಂಗಳೂರು ಆಕಾಶವಾಣಿ ಕೇಂದ್ರದ ಶ್ರೀಮತಿ ಸವಿತಾ ನಿರೂಪಿಸಿದರು. ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಶರಣು ಸಮರ್ಪಣೆ ಮಾಡಿದರು.