ಚಿತ್ರದುರ್ಗ : 12ನೇ ಶತಮಾನದ ಬಸವಾದಿ ಪ್ರಮಥರಿಂದ ಸ್ಥಾಪಿಸಲ್ಪಟ್ಟ ಶೂನ್ಯಪೀಠ ಪರಂಪರೆಯ ಚಿತ್ರದುರ್ಗದ ಶ್ರೀಮುರುಘಾಮಠವು ಹಲವಾರು ಸಾಮಾಜಿಕ ಸಂಕಷ್ಟಗಳ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದು, ಅದರ ಭಾಗವಾಗಿ ಇದೀಗ ಅತಿವೃಷ್ಟಿ ಮತ್ತು ಪ್ರಕೃತಿವಿಕೋಪಕ್ಕೆ ಒಳಗಾಗಿರುವ ನಮ್ಮ ರಾಜ್ಯದ ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿಗೆ ಮುಂದಾಗಿದೆ.

ಕೊಡಗಿನ ವಿವಿಧ ಭಾಗಗಳಲ್ಲಿ ಶಾಖಾಮಠ ಎಸ್ಟೇಟ್‍ಗಳನ್ನು ಹೊಂದಿರುವ ಶ್ರೀಮಠ ಸೋಮವಾರಪೇಟೆ ತಾಲ್ಲೂಕು ಬೇಳೂರು ಮಠ, ಅಬ್ಬಿಮಠ ಮತ್ತು ಮಾದಾಪುರ ಮಠಗಳಲ್ಲಿ ನೂರಾರು ಜನ ಸಂತ್ರಸ್ತರಿಗೆ ಆಶಯಕೇಂದ್ರಗಳನ್ನು ತೆರೆಯಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಸಂಬಂಧಪಟ್ಟ ಸಂತಸ್ತರುಗಳಿಗೆ ಕೋರಲಾಗಿದೆ. ಈ ನೆರವಿನಲ್ಲಿ ಕೊಡಗು ಜಿಲ್ಲಾಡಳಿತ ಕೂಡ ಕೈಜೋಡಿಸಿದ್ದು ಡಾ. ಶಿವಮೂರ್ತಿ ಮುರುಘಾ ಶರಣರು ಶ್ರೀಮಠದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.