ಬೆಂಗಳೂರು : ಮುಜರಾಯಿ ದೇವಾಲಯಗಳ ಪ್ರಧಾನ ಅರ್ಚಕರು ಹಾಗೂ ಅರ್ಚಕರಿಗೆ ಸಿಹಿಸುದ್ದಿ ನೀಡಿದ್ದು, ಪ್ರಧಾನ ಅರ್ಚಕರು ಹಾಗೂ ಅರ್ಚಕರನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬರುವ ವಿಮಾ ಸೌಲಭ್ಯಕ್ಕೆ ಕಡ್ಡಾಯವಾಗಿ ಒಳಪಡಿಸುವಂತೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಜರಾಯಿ ಇಲಾಖೆಯ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಪ್ರತಿ ಸಿಬ್ಬಂದಿ, ಮುಜರಾಯಿ ದೇವಾಲಯಗಳ ಪ್ರಧಾನ ಅರ್ಚಕರು ಹಾಗೂ ಅರ್ಚಕರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯೊಳಗೆ ಬರುವ ಪ್ರಧಾನಮಂತ್ರಿ ಭೀಮಾ ಯೋಜನೆ, ಪ್ರಧಾನಿಮಂತ್ರಿ ಸುರಕ್ಷಾ ಜ್ಯೋತಿ ಭೀಮಾ ಯೋಜನೆ ಹಾಗೂ ಎಸ್ ಬಿಐ ಬ್ಯಾಂಕ್ ನ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಸೂರೆನ್ಸ್ ಸಿಗುವಂತೆ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.