ಬೆಂಗಳೂರು: ನೀವು ತಿಳಿದಂತೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಅಷ್ಟು ಸುಲಭವಲ್ಲ

ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ  ಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಜನರು ಮರೆತುಹೋಗಿದ್ದರು. ಆದ್ರೆ ಜನರ ಅನುಗ್ರದಿಂದ ಮುಖ್ಯ ಮಂತ್ರಿ ಆಗಿದ್ದೇನೆ ಎಂದರು.

ಈ ದೋಸ್ತಿ ಸರಕಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರನಲ್ಲ. ಜೆಡಿಎಸ್ ಸ್ವಂತವಾಗಿ ಸರ್ಕಾರ ರಚನೆ ಮಾಡಿದ್ದರೆ, ನಿರ್ಧಾರ ಕೈಗೊಳ್ಳಬಹುದಿತ್ತು ಆದ್ರೆ. ಜನರು ಸಂಪೂರ್ಣ ಬಹುಮತ ಕೊಡಲಿಲ್ಲ ನಮ್ಮ ಪಕ್ಷಕ್ಕೆ ಆದ್ರೂ ನೀವು ತಿಳಿದಂತೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.