ಬೆಂಗಳೂರು:  ರಾಜ್ಯ ಸರಕಾರದ ಐದನೆ ಬಜೆಟ್  ಮತ್ತು ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಮಂಡಿಸಿದ  12ನೆ  ಬಜೆಟ್ ಆಗಿದೆ. ಬಜೆಟ್ ನ ಮುಖ್ಯಾಂಶಗಳೇನೆಂದರೆ.?

* 6 ಮೆಡಿಕಲ್ ಕಾಲೇಜು, 5 ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ

* ಅಮ್ಮಾ ಕ್ಯಾಂಟಿನ್ ಮಾದರಿ ಬೆಂಗಳೂರಿನಲ್ಲಿ   198  ನಮ್ಮ ಕ್ಯಾಂಟಿನ್ . 5 ರೂ.ಬೆಳಗ್ಗಿನ ತಿಂಡಿ, 10 ರೂ.ಗೆ ಮಧ್ಯಾಹ್ನ& ರಾತ್ರಿ ಊಟ. ಈ ಯೋಜನೆ 100 ಕೋಟಿ ರೂ. ಅನುದಾನ

* ಅನ್ನ ಭಾಗ್ಯ ಅಕ್ಕಿ: ಪ್ರತಿ ಕುಟುಂಬಕ್ಕೆ  ಅಕ್ಕಿ 5 ಕೆ.ಜಿಯಿಂದ  7 ಕೆ.ಜಿ. ಏರಿಕೆ

*ರೈತರ ಸಾಲ ಮನ್ನಾ ಇಲ್ಲ , ಸಾಲ ಮರುಪಾವತಿ ಅವಧಿ ವಿಸ್ತರಣೆ. ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ತನಕ ಅಲ್ಪಾವಧಿ ಸಾಲ.

* ಶೇ 3 ಬಡ್ಡಿ ದರದಲ್ಲಿ 10 ಲಕ್ಷ ರೂ ಕೃಷಿ ಸಾಲ.

*21  ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆ

*ಕ್ಷೇರ ಭಾಗ್ಯ ಯೋಜನೆಯಡಿ 5 ದಿನ ಹಾಲು ವಿತರಣೆ

* ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ

*ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 145 ಚಿಕಿತ್ಸಾ ಘಟಕ

*ಒಂದನೇ ತರಗತಿಯಿಂದಲೇ ಇಂಗ್ಲಿಷ್ ಶಿಕ್ಷಣ ಬೋಧನೆ.

*ರಾಜ್ಯದ  ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಮೂಲಕ ಸವಿರುಚಿ ಸಂಚಾರಿ ಕ್ಯಾಂಟಿನ್.

*ಖಾಸಗಿ ಸಂಸ್ಥೆಗಳಲ್ಲಿ ಎಸ್ಸಿ -ಎಸ್ಟಿ ಕಾರ್ಮಿಕರಿಗೆ ಉದ್ಯೋಗ

*ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮವಾಹಿನಿ ಯೋಜನೆ ಜಾರಿ.

*ಗ್ರಾಮೀಣ ಪ್ರದೇಶಗಳಲ್ಲಿ 2500 ಶುದ್ಧ ಕುಡಿಯುವ ನೀರಿನ ಘಟಕ. 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ.

*ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ.

*ವಿಶ್ವ ಕನ್ನಡ ಆಯೋಜನೆಗೆ 20 ಕೋಟಿ ರೂ.

*ಬೆಂಗಳೂರು  ಒನ್  ಮಾದರಿಯಲ್ಲಿ ಕರ್ನಾಟಕ ಒನ್ . 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಆರಂಭ.

* ರಾಜ್ಯದಲ್ಲಿ ನೀರಾ ನೀತಿ ಜಾರಿ, ಅಬಕಾರಿ ಕಾಯ್ದೆಗೆ ತಿದ್ದುಪಡಿ

*  ಬರಪ್ರದೇಶಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ.