ಬೆಂಗಳೂರು: ಚಾಮುಂಡಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈಗ ಬಾದಾಮಿಯಿಂದಲೂ ಸ್ಪರ್ಧೆಮಾಡಲಿದ್ದಾರೆ. ಸಿದ್ದರಾಮಯ್ಯರ ವಿರುದ್ಧ ಬಾದಾಮಿ ಕ್ಷೇತ್ರದಲ್ಲಿ ಬಿ.ಶ್ರೀರಾಮು ಸ್ಪರ್ಧೆ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಬಿಜೆಪಿ ಮುಖಂಡರಾದ ಪ್ರಕಾಶ್ ಜಾವೇಡ್ಕರ್ ಪ್ರಕಟಿಸಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಿಂದ ಈಗಾಗಲೇ ನಾಮ ಪತ್ರಸಲ್ಲಿಸಿರುವ ಶ್ರೀರಾಮುಲು ಬಾದಾಮಿಯಿಂದಲೂ ಸ್ಪರ್ಧೆಮಾಡಲಿದ್ದಾರೆ. ನಾಳೆ 12 ಗಂಟೆಗೆ ಶ್ರೀರಾಮುಲು ಸ್ಪರ್ಧೆಮಾಡಲಿದ್ದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮುಂತಾದ ಘಟಾನು ಘಟಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.