ಬಾಗಲಕೋಟೆ : ಸಿ.ಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಆಗ”ಸಿದ್ದ ವೇಳೆಯಲ್ಲಿ ತಂಗಿದ್ದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರೋ ರಾತ್ರೊ ಐಟಿ ರೇಡ್ ಮಾಡಲಾಗಿದೆ.
ಇಲ್ಲಿನ ಬಾದಾಮಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೃಷ್ಣ ಹೆರಿಟೇಜ್ ರೆಸಾರ್ಟ್ ನಲ್ಲಿ ಇರಬಹುದಾಗಿರುವ ಹಣ ಹಾಗೂ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೃಷ್ಣ ಹೆರಿಟೇಜ್ ರೆಸಾರ್ಟ್ ಇತ್ತೀಚಿಗೆ ಬಿಜೆಪಿಂದ ಕಾಂಗ್ರೆಸ್ ನಾಯಕ ಆನಂದ್ ಸಿಂಗ್ ಒಡೆತನಕ್ಕೆ ಸೇರಿದ ರೆಸಾರ್ಟ್.
ಅನುಮಾನ ಬಂದ ಹಿನ್ನೆ ಲೆಯಲ್ಲಿ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಮಂಗಳವಾರ ಮುಂಜಾನೆ ೨ಗಂಟೆ ಸುಮಾರಿಗೆ ಸರಿ ಸುಮಾರು ೧೦ ಮಂದಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಳೆದ ೭ ಗಂಟೆಯಿಂದ ಸತತ ಪರಿಶೀಲನೆ ನಡೆಸುತ್ತಿದ್ದಾರೆ ಮಾಹಿತಿ ಇಷ್ಟರಲ್ಲಿಯೇ ಹೊರ ಬೀಳಲಿದೆ.