1. ಸೂರಗೊಂಡನಕೊಪ್ಪ ಹೊನ್ನಾಳಿ ತಾಲ್ಲೂಕಿನಲ್ಲಿ ನೆಲೆಸಿರುವ ಲಂಬಾಣಿ ಜನಾಂಗದ ಆರಾಧ್ಯ ದೈವ ಶ್ರೀ ಸೇವಾಲಾಲ್ ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೂ.15 ಕೋಟಿ ನೀಡಲಾಗಿದೆ.
2. ರಾಜನಹಳ್ಳಿ ಹರಿಹರ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಸಮಗ್ರ ಅಭಿವೃದ್ಧಿಗೆ ರೂ.5 ಕೋಟಿ ನೀಡಲಾಗಿದೆ.
3. ಶ್ರೀ ಮಾತಂಗ ಮಹರ್ಷಿ ಸೇವಾಶ್ರಮ ಹಂಪಿ, ಹೊಸಪೇಟೆಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಮಾತಂಗ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
4. ಹಂಪಿಯ ಮಾತಂಗ ಮಹರ್ಷಿ ಸ್ಮಾರಕ ನಿರ್ಮಿಸಲು ರೂ.1 ಕೋಟಿ ಆಯವ್ಯಯದಲ್ಲಿ ಘೋಷಿಸಲಾಗಿದೆ.
5. ಚಿತ್ರದುರ್ಗದ ಭೋವಿ ಗುರುಪೀಠದಿಂದ ಚಿತ್ರದುರ್ಗದಲ್ಲಿ ಮತ್ತು ಬಾಗಲಕೋಟೆಯಲ್ಲಿ ಶಾಲಾ ಕಾಲೇಜು, ಭವನ ನಿರ್ಮಾಣ ಮಾಡಲು ರೂ.5 ಕೋಟಿ ಮಂಜೂರು ಮಾಡಲಾಗಿದೆ. ಜೊತೆಗೆ ಬೆಂಗಳೂರಿನಲ್ಲಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ.
6. ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಚಿತ್ರದುರ್ಗದಲ್ಲಿ ಮತ್ತು ಬೆಂಗಳೂರಿನಲ್ಲಿ ಶಾಲಾ, ಕಾಲೇಜು, ಹಾಸ್ಟೆಲ್ ಮತ್ತು ಭವನ ನಿರ್ಮಾಣ ಮಾಡಲು ರೂ.5 ಕೋಟಿ ಮಂಜೂರು ಮಾಡಲಾಗಿದೆ. ಜೊತೆಗೆ ಬೆಂಗಳೂರಿನಲ್ಲಿ 2 ಎಕರೆ ಜಮೀನು ಮಂಜೂರು ಮಾಡಿದೆ.
7. ಹಿರಿಯೂರಿನಲ್ಲಿ ಮಾದಿಗರ ಇತಿಹಾಸ ಸಾರುವ ಆದಿಜಾಂಬವ ಮಠಕ್ಕೆ ಶಾಲಾ-ಕಾಲೇಜು, ಹಾಸ್ಟೆಲ್, ಭವನ ನಿರ್ಮಾಣ ಮಾಡಲು ರೂ.3.5 ಕೋಟಿ ಮಂಜೂರು ಮಾಡಲಾಗಿದೆ.
8. ಕೋಡಿಹಳ್ಳಿ ಹಿರಿಯೂರು ತಾಲ್ಲೂಕು ಮಾದಿಗರ ಮೂಲ ಮಠವಾದ ಮಠದ ಸಮಗ್ರ ಅಭಿವೃದ್ಧಿಗೆ ರೂ.2.5 ಕೋಟಿ ಮಂಜೂರು ಮಾಡಲಾಗಿದೆ.
9. ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಸ್ಥಾಪನೆಗೊಂಡಿರುವ ಶಿವಶರಣ ಹರಳಯ್ಯ ಮಠದ ಸಮಗ್ರ ಅಭಿವೃದ್ಧಿಗೆ ರೂ.1 ಕೋಟಿ ಮಂಜೂರು ಮಾಡಲಾಗಿದೆ.
10. ಆಂಧ್ರಪ್ರದೇಶ ಮೂಲದ ಮಾದಿಗ ಜನಾಂಗದ ಇತಿಹಾಸ ಸಾರುವ “ಆದಿಜಾಂಬವ ಮಹಾಗುರು ಸಂಸ್ಥಾನ ಮಠಂ ಟ್ರಸ್ಟ್’ ವರ್ಲಕೊಂಡ ಸೋಮೇನಹಳ್ಳಿ, ಗುಡಿಬಂಡೆ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ಇಲ್ಲಿ ಶಾಲಾ-ಕಾಲೇಜು, ಹಾಸ್ಟೆಲ್, ಭವನ ನಿರ್ಮಾಣಕ್ಕೆ ರೂ.2 ಕೋಟಿ ಮಂಜೂರು ಮಾಡಲಾಗಿದೆ.
11. ಬೆಂಗಳೂರಿನಲ್ಲಿ ಚಲವಾದಿ ಮಹಾಸಭಾದ ವತಿಯಿಂದ ನಿರ್ಮಾಣವಾಗುವ ಬೃಹತ್ ಭವನಕ್ಕೆ ರೂ.3 ಕೋಟಿ ಮಂಜೂರು ಮಾಡಲಾಗಿದೆ.
12. ಚಿತ್ರದುರ್ಗದಲ್ಲಿ ಚಲವಾದಿ ಮಹಾ ಸಂಸ್ಥಾನ ಮಠದ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದ್ದ ರೂ.2 ಕೋಟಿ ಸ್ಥಗಿತಗೊಂಡಿತ್ತು. ಪುನಃ ರೂ.2 ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ.
13. ಮೈಸೂರಿನ ಉರಿಲಿಂಗಪೆದ್ದಿ ಮಠದ ನಿರ್ಮಾಣಕ್ಕೆ ರೂ.1 ಕೋಟಿ ಬಿಡುಗಡೆ ಮಾಡಲಾಗಿದೆ.
14. ಬಸವಕಲ್ಯಾಣದಲ್ಲಿ ಪೂಜ್ಯ ಮಾತೆಮಾದೇವಿ ಅವರ ಆಶ್ರಮದಲ್ಲಿ ಶಿವಶರಣ ಮಾದಾರ ಚನ್ನಯ್ಯ ಭವನ ನಿರ್ಮಾಣಕ್ಕೆ ರೂ.3 ಕೋಟಿ ಮಂಜೂರು ಮಾಡಲಾಗಿದೆ.
15. ಮೈಸೂರಿನಲ್ಲಿ ಕೊರಚ, ಕೊರಮ ಜನಾಂಗದ ಶಾಲಾ-ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ರೂ.1 ಕೋಟಿ ಮಂಜೂರು ಮಾಡಲಾಗಿದೆ.
16. ಮುರುಘಾ ಮಠದ ಆಡಳಿತದಲ್ಲಿರುವ ಎಸ್‍ಜೆಎಂ ಕಾಲೇಜಿನ ಆವರಣದಲ್ಲಿ ಡಾ.ಅಂಬೇಡ್ಕರ್ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ರೂ.3 ಕೋಟಿ ಮಂಜೂರು ಮಾಡಲಾಗಿದೆ.
17. ದಾವಣಗೆರೆ ತಾಲ್ಲೂಕು ಆನಗೋಡುನಲ್ಲಿ ವಿಶ್ವಬಂಧು ಮರುಳಸಿದ್ದರ ಭವನ ನಿರ್ಮಾಣ ಮಾಡಲು ರೂ.1 ಕೋಟಿ ಮಂಜೂರು ಮಾಡಲಾಗಿದೆ.
18. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಕಗ್ಗುಂಡಿ ಗ್ರಾಮದಲ್ಲಿರುವ ಶಿವಶರಣ ಹರಳಯ್ಯ ಐಕ್ಯ ಮಂಟಪ ಸ್ಮಾರಕ ನಿರ್ಮಿಸಲು ಮತ್ತು ಸಮಗ್ರ ಅಭಿವೃದ್ಧಿಪಡಿಸಲು ರೂ.5 ಕೋಟಿ ಮಂಜೂರು ಮಾಡಲಾಗಿದೆ.

ಎಂದು ಹೆಚ್. ಆಂಜನೇಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.