ಬೆಂಗಳೂರು : ಇಂದು ಮಧ್ಯಾಹ್ನ 3.50 ಕ್ಕೆ ಮುಹೂರ್ತ ನಿಗಧಿಯಾಗಿದ್ದು, ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಸದ್ಯ ಖಾಲಿಯಿರುವ ಏಳು ಸ್ಥಾನಗಳು ಭರ್ತಿಯಾಗಲಿದ್ದು, ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಈಗಾಗಲೇ ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೂ ಖೋ ನೀಡಬಹುದುಂತೆ.

ಸಂಭಾವ್ಯ ಸಚಿವರು:  ಉಮೇಶ್ ಕತ್ತಿ,. ಎಂಟಿಬಿ ನಾಗರಾಜ್. ಆರ್. ಶಂಕ ರ್. ಸಿ.ಪಿ. ಯೋಗೇಶ್ವರ್ ಮುರುಗೇಶ್ ನಿರಾಣಿ .ಅರವಿಂದ್ ಲಿಂಬಾವಳಿ, ಮುನಿರತ್ನ, ಹಾಲಪ್ಪ ಆಚಾರ್, ಎಸ್.ಅಂಗಾರ/ವಿ. ಸುನೀಲ್ ಕುಮಾರ್