ಬೆಳಗಾವಿ: ನೆರೆ ಪ್ರವಾಹದ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಆಗಮಿಸಿದ್ರು.

ಆಗ ರೈತರು ಭೂ ಸುಧಾರಣಾ ಕಾಯಿದೆಯ ತಿದ್ದುಪಡಿ ಹಿಂಪಡೆಯುವಂತೆ ಮತ್ತು ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಲು ಆಗಮಿಸಿದ್ದರು.

ಆದರೆ ಸಿಎಂ ರೈತರ ಮನವಿ ಸ್ವೀಕರಿಸಲು ನಿರಾಕರಿಸಿದರು. ಪರಿಣಾಮ ಆಕ್ರೋಶಗೊಂಡ ರೈತರು ಮುಖ್ಯಮಂತ್ರಿಗಳ ಎದುರೇ ‘ಯಡಿಯೂರಪ್ಪ ಸತ್ತಾನಪ್ಪೋ’ ಎಂದು ಧಿಕ್ಕಾರ ಕೂಗಿಬಿಡುವುದೇ.?