ಬೆಂಗಳೂರು: ಅಂತೂ ಕೊನೆಗೆ ದೋಸ್ತಿ ಸರಕಾರ ಅಧಿಕಾರಕ್ಕೆ ಬಂತು. ಕುಮಾರ ಸ್ವಾಮಿಯವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುಂಚೆ  ರೈತರ ಸಾಲ ಮನ್ನ ವಿಚಾರದ  ವಿವಾದ ಮೈಮೇಲೆ ಎಳೆದುಕೊಂಡರು. ವಿವಾದ ಇನ್ನೂ ಜೀವಂತವಾಗಿದೆ ಅಷ್ಟರಲ್ಲಿಯೇ ಮತ್ತೊಂದು ವಿವಾದ ಬಂದು ಕೂತಿದೆ.

ಏನಪ್ಪ ಅಂದ್ರೆ ಸಿದ್ದರಾಂಯ್ಯರು ಮುಖ್ಯ ಮಂತ್ರಿ ಆಗಿದ್ದಾಗ ಪ್ರತೇಕ ಲಿಂಗಾಯಿತ ಧರ್ಮ ದ ಬಗ್ಗೆ ಹಾಗೂ ರಾಜ್ಯದ ಪ್ರತ್ಯೇಕ ಧ್ವಜದ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.  ಆದ್ರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಪಕ್ಷ ಅಧಿಕರಕ್ಕೆ ಬಂದಿದೆ. ಪ್ರತ್ಯೇಕ ಲಿಂಗಾಯಿತ ಧರ್ಮ ಹಾಗೂ ರಾಜ್ಯದ ಪ್ರತ್ಯೇಕ ಧ್ವಜಕ್ಕೆ ಸಂಬಂಧಿಸಿದಂತೆ  ಮತ್ತೊಮ್ಮೆ ಶಿಫಾರಸ್ಸು ಮಾಡಿ ಎಂದು ಕೇಂದ್ರ ದಿಂದ ಪತ್ರ ಕಳುಹಿಸಿದ್ದಾರಂತೆ ಹಾಗಾಗಿ ಲಿಂಗಾಯಿತ ಪ್ರತ್ಯೇಕ ಧರ್ಮ ಹಾಗೂ ಧ್ವಜ ದ ಚಂಡು ಕುಮಾರಸ್ವಾಮಿಯವರ ಅಂಗಳಕ್ಕೆ ಬಂದಿದೆ.

ಈ ಎರಡು ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.