ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಖಾತೆಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡನೆ ಮಾಡಿದ್ದಾರೆ. ಇದೇ ವೇಳೆ ಬಜೆಟ್ ನ ಹೈಲೈಟ್ಸ್ .

ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆ. ಜೆ.ಪಿ.ನಗರದಿಂದ ಕೆ.ಆರ್.ಪುರಂ 42.75 ಕಿ.ಮೀ, ಟೋಲ್ ಗೇಟ್​ನಿಂದ ಕಡಬಗೆರೆ 12.5 ಕಿ.ಮೀ, ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ, ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ 18.95 ಕಿ.ಮೀ, ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆ 10.6. ಕಿ.ಮೀ ಹಾಗೂ ಇಬ್ಬಲೂರಿನಿಂದ ಕರ್ಮಲ್ ರಾಮ್ 6.67 ಕಿ.ಮೀ, ಒಟ್ಟು 95 ಕಿ.ಮೀ ಮೆಟ್ರೊ ವಿಸ್ತರಣೆಗೆ ಸಮ್ಮತಿ.

ಏಳು ಜಿಲ್ಲೆಯಲ್ಲಿ ಕೈಗಾರಿಕಾ ತರಬೇತಿಗೆ 500 ಕೋಟಿ ಮೀಸಲು.

ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಆದ್ಯತೆ. ತುಮಕೂರಿನಲ್ಲಿ ಸ್ಪೋರ್ಟ್ಸ್​​ ಮತ್ತು ಫಿಟ್ನೆಸ್​​ ವಸ್ತುಗಳ ಉತ್ಪಾದನಾ ಘಟಕ ಸ್ಥಾಪನೆ. 4 ವರ್ಷದಲ್ಲಿ 2000 ಕೋಟಿ ಬಂಡವಾಳ ಹೂಡಿಕೆ ಉದ್ದೇಶ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ.

ದಿವ್ಯಾಂಗರಿಗೆ ಶೇ.3ರಷ್ಟು ಮೀಸಲಾತಿ. ಆನ್​​ಲೈನ್​​ನಲ್ಲೇ ಅರ್ಜಿ ಪಡೆದು ದಿವ್ಯಾಂಗರಿಗೆ ಮನೆ ಹಂಚಿಕೆ.

ಧಾರವಾಡ, ಕಲಬುರಗಿ, ಮೈಸೂರಿನಲ್ಲಿ 3 ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆ, 2.25 ಕೋಟಿ ವೆಚ್ಚದಲ್ಲಿ 3 ಘನೀಕೃತ ವೀರ್ಯನಳೀಕೆಗಳ ವಿತರಣಾ ಕೇಂದ್ರ ಸ್ಥಾಪನೆ, 3 ಕೋಟಿ ವೆಚ್ಚದಲ್ಲಿ ಜಲಕೃಷಿ ವಿಧಾನದಿಂದ ಹಸಿರು ಮೇವು ಉತ್ಫಾದನಾ ಘಟಕ ಸ್ಥಾಪನೆ

ಮೈಸೂರು ಜಿಲ್ಲೆಯಲ್ಲಿ ICB ಚಿಪ್​​ ತಯಾರಿಕಾ ಸಂಸ್ಥೆ ಸ್ಥಾಪನೆ. ಬೀದರ್​ ಜಿಲ್ಲೆಯಲ್ಲಿ ಕೃಷಿ ಹೊಸ ತಂತ್ರಜ್ಞಾನ ಯಂತ್ರಗಳ ಘಟಕ ಸ್ಥಾಪನೆ. ಈ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ತರಬೇತಿ. ಪ್ರತಿ ಜಿಲ್ಲೆಯಲ್ಲಿ 6 ತಿಂಗಳಿನಿಂದ 2 ವರ್ಷದವರೆಗೆ ತರಬೇತಿ. ಬಂಡವಾಳ ಹೂಡುವ ಕಂಪನಿಗಳಿಗೆ 2000 ಕೋಟಿ ನೆರವು ನೀಡಲಾಗಿದೆ.