ಬೆಂಗಳೂರು: ಎರಡು ತಿಂಗಳ ಕೆಳಗೆ  ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್. ಡಿ. ಕುಮಾರಸ್ವಾಮಿ ಅವರು ಸ್ವೀಕರಿಸಿದ ಪ್ರಮಾಣ ವಚನ ಸಮಾರಂಭದಿಂದಾಗಿ ರಾಜ್ಯಕ್ಕೆ ಆದ ನಷ್ಟ 60 ಲಕ್ಷ.!

ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಸಲ್ಲಿಸಿದ್ದ ಆರ್ ಟಿಐ ಅರ್ಜಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮೇ 17 ರಂದು ಬಿ.ಎಸ್. ಯಡಿಯೂರಪ್ಪ ರಾಜಭವನದಲ್ಲಿ ಸ್ವೀಕರಿಸಿದ ಪ್ರಮಾಣ ವಚನ ಸಮಾರಂಭಕ್ಕೆ 16 ಲಕ್ಷದ 14 ಸಾವಿರದ 750 ರೂಪಾಯಿ ವೆಚ್ಚವಾಗಿದ್ದರೆ, ಮೇ 23 ರಂದು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ 42 ಲಕ್ಷದ 89 ಸಾವಿರದ 940 ರೂಪಾಯಿ ವೆಚ್ಚ ವಾಗಿದೆ. ಜನಪರ ಸರಕಾರ ಅಂದ್ರೆ ಇದಪ್ಪ.  ಪ್ರಮಾಣವಚನಕ್ಕೆ ಸುಮಾರು 60 ಲಕ್ಷ ಖರ್ಚುಮಾಡಿದ್ರೆ ಇವರ ಪ್ರಯಾಣದ ವೆಚ್ಚ ಎಷ್ಟಾಗಬಹುದು ಎಂಬುದು ಸಾಮಾನ್ಯನ ಪ್ರಶ್ನೆ.