ಬೆಂಗಳೂರು: ಅರೆ. ಏಕೆ. ಏನು ಪಾಪ ಮಾಡಿದ್ರು ಬಾರ್ ಮಾಲೀಕರು. ಅಂತ ನಿಮ್ಮ ಪ್ರಶ್ನೆ ಇರಬಹುದಲ್ಲವೆ.? ಏಕೆಂದ್ರೆ ಕೊರೋನಾ ಮಾರಿಯಿಂದ ದೇಶದಲ್ಲಿ ಲಾಕ್ ಡೌನ್ ಆಗಿತಲ್ವ ಆಗ ಬಾರ್, ಎಂಎಸ್ಐಲ್ , ವೈನ್ ಶಾಪ್ ಬಂದ್ ಆಗಿತ್ತು. ಬಂದ್ ಮಾಡಿದ್ರು ಮಾಲೀಕರು.!

ಮತ್ತೇನು ಬಾರ್ ಮಾಲೀಕರಿಗೆ ಮಾರಿ ಹಬ್ಬ.  ಅವರಿಗೆನು ಸಮಸ್ಯೆ ಆಗುತ್ತೆ ಅಂತ ನಿಮ್ಮಗಳ ಪ್ರಶ್ನೆ. ಇಲ್ಲೆ ಇರುವುದು ಟ್ರಿಕ್. ಮಾರ್ಚ್ 15 ರಂದು ರಾಜ್ಯದಲ್ಲಿ ಕೊರೋನಾ ಏಫೆಕ್ಟ್ ನಿಂದ ಬಾರ್ ಬಂದ್ ಮಾಡಲಾಯಿತು ಆನಂತರ ದೇಶದೆಲ್ಲಡೆ  ಲಾಕ್ ಡೌನ್  ಶುರವಾಯಿತು. ಆದರೂ ಡಬಲ್ ರೇಟಿಗೆ ಕಾಳ ಸಂತೆಯಲ್ಲಿ ಕೆಲವರು ಎಣ್ಣೆ ಮಾರಾಟ ಮಾಡದರಂತೆ.!

ಕೆಲವರಿಗೆ ಡಬಲ್ ರೇಟ್ ಕೊಟ್ಟು ಎಣ್ಣೆ (ಡ್ರಿಂಕ್ಸ್) ಕೊಳ್ಳಲು ಸಾಧ್ಯವಾಗದೆ ಸುಮ್ಮನಾದರು. ಅದೆಲ್ಲಾ ಸರಿ ಬಾರ್ ಮಾಲೀಕರಿಗೆ ಮಾರಿ ಹಬ್ಬ. ? ಏಕೆಂದರೆ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಎಂಎಸ್ಐಎಲ್ ಇವರುಗಳು ಪ್ರತಿದಿನ ಅಬಕಾರಿ ಕಚೇರಿಗೆ  ಸ್ಟಾಕ್ ಎಷ್ಟು ಇದೆಯಂದು ಲೆಕ್ಕಾ ಕಡಬೇಕಾಗಿತ್ತು.  ಮಾರ್ಚ್ 14 ರಂದು ನೀಡಿದ ಸ್ಟಾಕ್. ಲಾಕ್ ಡೌನ್ ಮುಗಿದು ಮತ್ತೆ ಆಗಿ ಅಂಗಡಿ ಓಪನ್ ಆದ ಮೇಲೆ ಕೊಡುವ ಸ್ಟಾಕ್ ಏನಾದರು ವ್ಯತ್ಯಾಸ ಆದರೆ ಆ ಮಾಲೀಕರ ಮೇಲೆ ಕೇಸ್ ಹಾಗೂ ಅಂಗಡಿ ಲೈಸನ್ಸ್ ರದ್ದು ಮಾಡಲಾಗುತ್ತದೆಯಂತೆ.! ಹಾಗಾದರೆ ಬಾರ್ ಮಾಲೀಕರಿಗೆ ಮಾರಿ ಹಬ್ಬ ಅಲ್ಲದೆ ಮತ್ತೇನು ಎಂಬುದು ಕೆಲವ ಪ್ರಶ್ನೆ.!