ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 6 ತಿಂಗಳ ಒಳಗೆ ವಿಪಕ್ಷ ನಾಯಕರಾಗಲಿದ್ದಾರಂತೆ ಅದು ಹೇಗೆ ಅಂದ್ರೆ  ತಮಿಳುನಾಡಿನ ವೆಲ್ಲೂರ್ & ಬಿಹಾರದ ಸಮಸ್ತಿಪುರದಲ್ಲಿ ಕಾಂಗ್ರೆಸ್ ಗೆದ್ದರೆ ರಾಹುಲ್ ವಿಪಕ್ಷ ನಾಯಕ ಆಗುತ್ತಾರೆ.

ವೆಲ್ಲೋರ್ ಕ್ಷೇತ್ರಕ್ಕೆ ಆ.5ರಂದು ಚುನಾವಣೆ ನಡೆಯಲಿದೆ. ಇನ್ನು ಸಮಸ್ತಿಪುರ ಸಂಸದ ರಾಮ್ ಚಂದ್ರ ಪಾಸ್ವಾನ್ ಸಾವನ್ನಪ್ಪಿದ್ದು, 6 ತಿಂಗಳ ಒಳಗೆ ಉಪ ಚುನಾವಣೆ ನಡೆಯಲಿದೆ. ವಿಪಕ್ಷ ಸ್ಥಾನ ಅಲಂಕರಿಸಲು 54 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್ ಸದ್ಯ 52ರ ಸ್ಥಾನಗಳನ್ನು ಪಡೆದಿದೆ ಹಾಗಾಗಿ ಎರಡು ಸ್ಥಾನಗಳಲ್ಲಿ ಗೆದ್ದರೆ ರಾಹುಲ್ ವಿಪಕ್ಷ ಸ್ಥಾನ ಗ್ಯಾರಂಟಿ.!